Pavagada prakash rao biography sample

ಪಾವಗಡ ಪ್ರಕಾಶ ರಾವ್

ಚಿತ್ರ:Pavagada prakasha rao.jpg

ಡಾ.'ಪಾವಗಡ ಪ್ರಕಾಶ್ ರಾವ್, ಒಬ್ಬ ಅತ್ಯಂತ ಸಮರ್ಥ ಉಪನ್ಯಾಸಕಾರರು. ಬೆಂಗಳೂರಿನ 'ಚಂದನ ಟೆಲಿವಿಶನ್ ಮಾದ್ಯಮ'ದಲ್ಲಿ ಅತಿಹೆಚ್ಚು ಸಮಯದಿಂದ ತಮ್ಮ ಅತ್ಯಂತ ಜನಪ್ರಿಯ ಕಾರ್ಯಕ್ರಮ, ’ಸತ್ಯದರ್ಶನ’ ವನ್ನು ನಡೆಸಿಕೊಂಡು ಬಂದಿರುವ ಹೆಗ್ಗಳಿಕೆ ಅವರಿಗಿದೆ. ಜನಸಾಮಾನ್ಯರಿಗೆ ಅವರು ಪ್ರೀತಿಯ ಗುರುಗಳಾಗಿ, ಮಹಾಭಾರತದ ಮೇಲೆ ತಮ್ಮ 'ವಿದ್ವತ್ಪೂರ್ಣ ಉಪನ್ಯಾಸಮಾಲೆ'ಯನ್ನು ಪ್ರಾರಂಭಿಸಿದ್ದಾರೆ.

ಸಾಮಾನ್ಯವಾಗಿ ಎಲ್ಲ ಉಪನ್ಯಾಸಕರೂ ಪ್ರತಿಪದಾರ್ಥದ ಶೈಲಿಯನ್ನೇ ಪ್ರಮುಖವಾಗಿಟ್ಟುಕೊಳ್ಳುವ ಮಾರ್ಗದ ಜೊತೆಗೆ, ವಿಜ್ಞಾನದ ಹಿನ್ನೆಲೆಯನ್ನೂ ಸೇರಿಸಿ,'ಸಾಮಾನ್ಯ-ಜ್ಞಾನ' ಮತ್ತು 'ತರ್ಕಗಳನ್ನೂ', ಮತ್ತು ಹಲವಾರು ಇಂದಿನ ದಿನದ ಸನ್ನಿವೇಶಗಳನ್ನೂ ಸಮರ್ಪಕವಾಗಿ ಬಳಸುತ್ತಾ, ಉದಾಹರಿಸುತ್ತಾ, ಒಂದು ವಿಶಿಷ್ಟವಾದ ಶೈಲಿಯಲ್ಲಿ 'ಮಹಾಭಾರತದ ಭಗವದ್ಗೀತಾ ದರ್ಶನ'ಮಾಡಿಸುತ್ತಿದ್ದಾರೆ.[೧] ಅವರ ರಾಮಾಯಣ,ವೇದ,ಉಪನಿಷತ್,ಗಳ ಬಗ್ಗೆ ಮಾಹಿತಿಗಳು, ಕನ್ನಡದ ಕವಿಗಳು,ದಾರ್ಶನಿಕರು, ಯತಿವರ್ಯರು, ಚಾರಿತ್ರ್ಯಿಕ ವ್ಯಕ್ತಿಗಳು,ವಿಜ್ಞಾನಿಗಳು,ಮತಸುಧಾರಕರು, ರಾಷ್ಟ್ರನಿರ್ಮಾಪಕರು, ಭಾರತೀಯರು,ಹಾಗೂ ಪಾಶ್ಚಿಮಾತ್ಯರು, ಮೊದಲಾದ ವ್ಯಕ್ತಿಗಳ ಬಗ್ಗೆ ಸಮಗ್ರಮಾಹಿತಿಗಳನ್ನು ಸ್ಪಷ್ಟವಾಗಿ ಕೊಡುತ್ತಾರೆ.

ವಿದ್ಯಾಭ್ಯಾಸ

[ಬದಲಾಯಿಸಿ]

ಪಾವಗಡ,[೨] (ತುಮಕೂರು ಜಿಲ್ಲೆ) ದವರಾದ ಪಾವಗಡ ಪ್ರಕಾಶರಾಯರು, 'ಕನ್ನಡ ಎಮ್.ಎ' ; ಮತ್ತು 'ಕಾನೂನು ಶಾಸ್ತ್ರದಲ್ಲಿ ಪದವಿ'ಯೊಂದಿಗೆ ವಿಶೇಷವಾಗಿ ಪರಿಣತಿಪಡೆದಿದ್ದಾರೆ.ಇವರು SSMRV ಕಾಲೇಜ್ ನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಇವೆಲ್ಲ ಜ್ಞಾನ ಕ್ಷೇತ್ರಗಳ ನಡುವೆ ಅವರನ್ನು ಆಕರ್ಶಿಸಿದ್ದು, 'ವೇದ', 'ವೇದಾಂತ', 'ಉಪನಿಷತ್ತುಗಳು', ಮತ್ತು 'ಪುರಾತನ ವೈದಿಕ ಪದ್ಧತಿ'ಗಳು.

ಆಚಾರ್ಯತ್ರಯರ ಬಗ್ಗೆ, ವಿಶೇಷವಾಗಿ 'ಅದ್ವೈತ ಸಿದ್ಧಾಂತ'ದ, ಶ್ರೀ ಶ್ರೀ ಶ್ರೀ ಶಂಕರ ಭಗವತ್ಪಾದರ ಜೀವನಾದರ್ಶಗಳ ಮೇಲೆ ಬಹಳ ವರ್ಷಗಳಿಂದ ಹಲವಾರು ವೇದಿಕೆಗಳಲ್ಲಿ ಉಪನ್ಯಾಸ ನೀಡುತ್ತಾ ಬಂದಿದ್ದಾರೆ. ಈ ಪಂಡಿತೋತ್ತಮರು ಪ್ರತಿಉಪನ್ಯಾಸ ಕೊಡುವ ಮೊದಲು ಪೂರ್ವಸಿದ್ಧತೆಯನ್ನು ಸಮರ್ಪಕವಾಗಿ ಮಾಡಿಕೊಂಡು ಮುಂದುವರೆಯುತ್ತಾರೆ. ಪ್ರಕಾಶ್ ರಾವ್, ಎಲ್ಲಾ ಮತಗಳು, ಧರ್ಮಗಳು, ಸಮುದಾಯಗಳ ಬಗ್ಗೆ ಅಪಾರ ಆಸಕ್ತಿ, ಮತ್ತು ಗೌರವವನ್ನು ಹೊಂದಿದ್ದಾರೆ.

'ಸತ್ಯದರ್ಶನ'

[ಬದಲಾಯಿಸಿ]

ಈಗ ಈ ಜನಪ್ರಿಯ ಕಾರ್ಯಕ್ರಮ, ಹನ್ನೆರಡೂವರೆ ವರ್ಷ ದಾಟಿದೆ. [೩]

'ಚಂದನ ವಾಹಿನಿಯ',ಯಲ್ಲಿ 'ಭಗವದ್ಗೀತೆ'ಪ್ರಸಾರ

[ಬದಲಾಯಿಸಿ]

  • 'ಭಗವದ್ಗೀತಾ-ಟೆಲಿವಿಶನ್ ಆವೃತ್ತಿ'ಯನ್ನು ನಿರ್ದೇಶಿಸುತ್ತಿರುವವರು, ಶ್ರೀ.ಕೆ.ಪುರುಷನಾಥ್. ಧಾರಾವಾಹಿಗೆ,
  • 'ಸಂಗೀತ'ವನ್ನು 'ಎಂ.ಎಸ್.ಮಾರುತಿ', ಒದಗಿಸಿದ್ದಾರೆ.
  • 'ಸಾಹಿತ್ಯ'ವನ್ನು, 'ಶ್ರೀ.

    ಚಿಂದೋಡಿ ಬಂಗಾರೇಷ್' ಒದಗಿಸಿದ್ದಾರೆ.

  • 'ಶೀರ್ಷಿಕೆಯ ಜನಪ್ರಿಯ ಶ್ಲೋಕ'ವನ್ನು,ಖ್ಯಾತ ಸಿನೆ-ಚಿತ್ರಗಾಯಕ,ಶ್ರೀ.ಎಸ್.ಪಿ.ಬಾಲಸುಬ್ರಮ್ಹಣ್ಯಂ, ರಸವತ್ತಾಗಿ ಹಾಡಿದ್ದಾರೆ.
  • 'ಸಂಕಲನ, 'ಶ್ರೀ. ಹರೀಶ್ ಕೊದ್ವಾಡಿ'ಯವರದು, ಮತ್ತು ಇದರ ಸಹನಿರ್ದೇಶಕರು, ಶ್ರೀ.ರಾಘವೇಂದ್ರ ಗುಂಡ್ಮಿಯವರು.
  • ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರ ಪಡಿಸುತ್ತಿದ್ದ, 'ಸತ್ಯ ದರ್ಶನ ಕಾರ್ಯಕ್ರಮ', ೧,೦೦೮ ದ ಗಡಿ ಮೀರಿತು.[೪]
  • ಸತ್ಯದರ್ಶನ ಕಾರ್ಯಕ್ರಮ, ತನ್ನ ೧,೧೧೧ ಕಂತನ್ನು ಮುಗಿಸಿ ವಿಕ್ರಮ ಸಾಧಿಸಿದೆ.

    [೫], [೬]

ರಾಮಾಯಣದ ಬಗ್ಗೆ ಪ್ರವಚನ

[ಬದಲಾಯಿಸಿ]

ರಾಮಾಯಣದ ಅವಲೋಕನ, ಅಂಕಣದ ಪ್ರತಿಗಳು, 'ಕನ್ನಡ ಪ್ರಭ ದಿನಪತ್ರಿಕೆ'ಯಲ್ಲಿ ಪ್ರಕಟವಾಗುತ್ತಾ ಬಂದಿವೆ. [೭]ಶ್ರೀಮದ್ ರಾಮಾಯಣದ ಪ್ರವಚನ, ಕೊಡುತ್ತಾ, ಅಹಲ್ಯಾ ಪ್ರಕರಣವನ್ನು ಕುರಿತು, ಪ್ರಕಾಶರಾಯರು ಬೆಳಕು ಚೆಲ್ಲಿದ್ದಾರೆ.

ಬಿರುದು ಪ್ರಶಸ್ತಿಗಳು

[ಬದಲಾಯಿಸಿ]

ವಿದ್ವಾನ್ ಡಾ.ಪಾವಗಡ ಪ್ರಕಾಶ್ ರಾವ್[೮] ಒಬ್ಬ ಪ್ರಸಿದ್ಧ, ಬಹುಶೃತ ವಿದ್ವಾಂಸರು. ಪಾವಗಡ ಪ್ರಕಾಶ್ ರಾವ್ ಒಬ್ಬ ವೈಚಾರಿಕ, ಪ್ರಭಾವಿ ಮಾತುಗಾರ, ಪ್ರಚಂಡ ಜ್ಞಾಪಕ ಶಕ್ತಿಯನ್ನು ಹೊಂದಿರುವ ವ್ಯಕ್ತಿ. ತಮ್ಮ ಉಪನ್ಯಾಸದ ಸಮಯದಲ್ಲಿ ಯಾವ ಲಿಖಿತ ದಾಖಲಾತಿಗಳನ್ನೂ ನೋಡಿಕೊಳ್ಳದೆ, ತಮ್ಮ ಸ್ಮರಣಶಕ್ತಿಯಿಂದಲೇ ವಿಚಾರಗಳನ್ನು ಮಂಡಿಸುವ ಶಕ್ತಿಯನ್ನು ಹೊಂದಿದ್ದಾರೆ.

ತಮ್ಮ ವಿದ್ಯಾರ್ಥಿಜೀವನದ ಬಳಿಕ ಬೆಂಗಳೂರಿನ 'ಎಸ್.ಎಸ್.ಆರ್.ವಿ.ಕಾಲೇಜ್' ನಲ್ಲಿ ಉಪನ್ಯಾಸಕರಾಗಿ ದುಡಿದರು. ಸ್ವಲ್ಪ ಸಮಯ ವಕೀಲರಾಗಿ ಕಾರ್ಯನಿರ್ವಹಿಸಿದರು. ಅನೇಕ ಗ್ರಂಥಗಳು ಪತ್ರಿಕೆಗಳಿಗೆ ಸಂಪಾದಕರಾಗಿ ಕೆಲಸಮಾಡಿದರು.

  1. ಸಂಕ್ರಾಂತಿ,
  2. ವಿಪ್ರನುಡಿ,
  3. ವಿನಯ, ಮೊದಲಾದ ಪತ್ರಿಕೆಗಳ ಸಂಪಾದಕರಾಗಿ ಕೆಲಸ ನಿರ್ವಹಿಸಿದರು.
  4. 'ಸೋನಾಟ ಸಾಫ್ಟ್ವೇರ್ ಕಂಪೆನಿಯ ಕನ್ನಡ ನಿಘಂಟು', ನಿರ್ಮಾಣದಲ್ಲಿ ತಮ್ಮ ಯೋಗದಾನ ಮಾಡಿದ್ದಾರೆ.
  5. ದೂರದರ್ಶನದ 'ಶೃಂಗೇರಿ ದರ್ಶನ', 'ಕನಕದಾಸರು', ಮೊದಲಾದ ಸಾಕ್ಷ್ಯ ಚಿತ್ರಗಳ ನಿರ್ಮಾಣ ಹಾಗೂ ನಿರೂಪಣೆಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ.

ವೀಕ್ಷಕ ವ್ಯಾಖ್ಯಾನಗಳು

[ಬದಲಾಯಿಸಿ]

  1. ತಿರುಮಲ ತಿರುಪತಿ ಕ್ಷೇತ್ರದ ಬ್ರಹ್ಮೋತ್ಸವದ ಸಮಯದಲ್ಲಿ ವೀಕ್ಷಕ ವ್ಯಾಖ್ಯಾನ,
  2. ಶಬರಿಮಲೆ ಮಕರ ಜ್ಯೋತಿ ವೀಕ್ಷಕ ವ್ಯಾಖ್ಯಾನ,

ಹಲವು ಅಧ್ಯಯನಗಳು

[ಬದಲಾಯಿಸಿ]

  1. ಭಾಗವತ ಪದ್ಯಾನುವಾದ,
  2. ಪತಂಜಲಿ ಮಹರ್ಷಿಗಳ ಯೋಗ ಸೂತ್ರ,
  3. ಕುಮಾರ ವ್ಯಾಸ ಭಾರತ,
  4. ಜೈಮಿನಿಭಾರತ,
  5. ಕನಕದಾಸರ ಬಗ್ಗೆ,
  6. ಬೇಂದ್ರೆಯವರ ಮೇಲೆ ಅಧ್ಯಯನ,
  7. ಬಸವಣ್ಣನವರು,
  8. ಅಲ್ಲಮಪ್ರಭು,
  9. ಅಕ್ಕಮಹದೇವಿ, ಮೊದಲಾದವರ ಬಗ್ಗೆ,

ಇನ್ನಿತರ ಬೌಧ್ಧಿಕ ನಿಲವುಗಳು

[ಬದಲಾಯಿಸಿ]

  1. ಗಾಂಧಿತತ್ವ ಶಾಸ್ತ್ರ,
  2. ತೌಲನಿಕ ವಿಶಿಷ್ಠಾದೈತ ಸಿದ್ಧಾಂತ ಶಿಖಾಮಣಿ,
  3. ಪ್ರಜ್ಞಾಪ್ರಮಾಣ-ಜೀವಂತ ಪ್ರತಿಭಾವಂತರ ಪಾರಿಚಯ,
  4. ಜಾತಕ ಕಥೆಗಳನ್ನಾಧರಿಸಿದ ನಾಟಕ,

'ಬೌಧ್ಧಿಕ ಕ್ಷತ್ರಿಯ'

[ಬದಲಾಯಿಸಿ]

ಆಂಗ್ಲ ಪ್ರತಿಭಾವಂತ ಉಪನ್ಯಾಸಕಾರ,ಡೇವಿಡ್ ಫ್ರಾಲಿ (David Frawley) (ವಾಮದೇವ ಶಾಸ್ತ್ರಿ) ಪ್ರಕಾಶರಾಯರನ್ನು 'ಬೌದ್ಧಿಕ ಕ್ಷತ್ರಿಯ' ನೆಂದು ಸಂಬೋಧಿಸಿ ಕರೆದಿದ್ದಾರೆ.

  1. ಉಪನ್ಯಾಸ ಸಮಯದಲ್ಲಿ ಕೆಲವು ವಿಕೃತ ಮನಸ್ಸಿನ ಜನರ ಶಂಕೆಗಳನ್ನು ಸಮರ್ಥವಾಗಿ ನಿವಾರಿಸಿ, ಅವರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
  2. ೨೦೦೩ ರಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ ಇವರು ನಡೆಸಿಕೊಡುತ್ತಿದ್ದ 'ಸತ್ಯದರ್ಶನ' ಕಾರ್ಯಕ್ರಮ ೧,೧೧೧ ಸಂಚಿಕೆಗಳನ್ನು ಪೂರೈಸಿ ಮುಕ್ತಾಯಗೊಂಡಿದ್ದು ಧರ್ಮ, ಧರ್ಮ ಗ್ರಂಥ, ಆಚರಣೆಗಳಿಗೆ ಸಂಬಂಧಿಸಿದಂತೆ ಜನರ ಸಂಶಯಗಳ ನಿವಾರಣೆಗೆ ಅಪಾರ ಜನಪ್ರಿಯತೆ ಗಳಿಸಿದೆ.
  3. ಸತ್ಯದರ್ಶನದೊಂದಿಗೆ ಭಗವದ್ಗೀತೆಯ ೭೧೨ ಉಪನ್ಯಾಸಗಳು ಸೇರಿ ಒಟ್ಟು ದಾಖಲೆಯ ೧೮೨೩ ಉಪನ್ಯಾಸಗಳನ್ನು ನೀಡಿದ್ದಾರೆ.

ಬಿರುದುಗಳು

[ಬದಲಾಯಿಸಿ]

  1. ಜ್ಞಾನ ಪ್ರಕಾಶ,
  2. ವಿದ್ಯಾ ವಿಶಾರದ,
  3. ಜ್ಞಾನ ಭಾಸ್ಕರ,
  4. ಪ್ರಕಾಶರಾಯರಿಗೆ, ತುಮಕೂರು ಹಾಗೂ ಮೈಸೂರು ವಿಶ್ವವಿದ್ಯಾನಿಲಯಗಳು ಪಿ.ಎಚ್.ಡಿ.

    ಪದವಿಗಳನ್ನು ನೀಡಿ ಗೌರವಿಸಿವೆ.(ಡಾಕ್ಟೊರೇಟ್ ಗಳನ್ನು)

ವ್ಯಾಸಪೂರ್ಣಿಮಾ ಮತ್ತು ಗುರುಪೂರ್ಣಿಮ ಆಚರಣೆ

[ಬದಲಾಯಿಸಿ]

ಶ್ರೀಮದ್ ವಾಲ್ಮೀಕಿ ವಿರಚಿತ ರಾಮಾಯಣ ಪ್ರವಚನ ಸಂಪೂರ್ಣ ರಾಮಾಯಣ ಅವಲೋಕನ. (೦೯-೦೭-೨೦೧೭ ರಂದು. [೯]

ಉಲ್ಲೇಖಗಳು

[ಬದಲಾಯಿಸಿ]

  1. ↑‘ಭಗವದ್ಗೀತೆ ಪ್ರವಚನ-100’ ವೆಬ್‌ಸೈಟ್, ಪ್ರಜಾವಾಣಿ, ಮಾರ್ಚಿ 16, 2010
  2. ↑ಪಾವಗಡ ಊರಿನ ವಿವರ
  3. ↑೦೯,ಮೇ, ೨೦೧೬, ದೂರದರ್ಶನದ ಚಂದನ ವಾಹಿನಿ ಬಿತ್ತರಿಸುತ್ತಿದ್ದ 'ಸತ್ಯದರ್ಶನ' ಕಾರ್ಯಕ್ರಮ, ೧,೦೦೦ ಕಂತುಗಳನ್ನು ಮುಟ್ಟಿದೆ
  4. ↑ವಿಜಯವಾಣಿ ಸಂದರ್ಶನ, ಜೂನ್,೬,೨೦೧೬,'ಜನಮನ ಸೂರೆಗೊಂಡ ಸತ್ಯದರ್ಶನ'
  5. "ಸಾವಿರಕ್ಕೂ ಹೆಚ್ಚಿನ ಸಂಚಿಕೆಗಳ ಸತ್ಯದರ್ಶನ: ಜೂ.27 ರಂದು ಸತ್ಯದರ್ಶನ-ಸಹಸ್ರದರ್ಶನ ಸಹಸ್ರಾಭಿನಂದನೆ ಕಾರ್ಯಕ್ರಮ,ಕನ್ನಡ ಪ್ರಭಾ ದಿನಪತ್ರಿಕೆ, 24 Jun 2017".

    Archived raid the original on 5 ಡಿಸೆಂಬರ್ 2017. Retrieved 23 ಜುಲೈ 2017.

  6. ↑ಸತ್ಯದರ್ಶನ ಚಂದನವಾಹಿನಿಯ ಬಲು ಜನಪ್ರಿಯ ಕಾರ್ಯಕ್ರಮಗಳಲ್ಲೊಂದು
  7. ↑'ರಾಮಾಯಣ ಅವಲೋಕನ'-ಡಾ.ಪಾವಗಡ ಪ್ರಕಾಶ ರಾವ್, ರಾಮಾಯಣ ಕೃತಿ ಜಿಜ್ಞಾಸೆ,ಪ್ರಶ್ನೆಗಳಿಗೆ ರಾಮಾಯಣ ಅವಲೋಕನದ ಮೂಲಕ ಉತ್ತರ. ಜನವರಿ,೪,೨೦೧೭, ಅಂಕಣದ ಪ್ರತಿ. ೧೮-೦೧-೨೦೧೭, ಪರಿಷ್ಕೃತ.೩೧-೦೩-೨೦೧೭
  8. ↑ಕನ್ನಡ ಪ್ರಭ ದಿನ ಪತ್ರಿಕೆಯೊಂದರಲ್ಲಿ ಪ್ರಕಾಶರಾಯರ ಪ್ರಶಸ್ತಿ ಹಾಗೂ ಗೌರವ ಡಾಕ್ಟರೇಟ್ ಗಳ ಬಗ್ಗೆ ವಿವರಗಳಿವೆ.

  9. ↑ಕನ್ನಡದ ಸುಖ್ಯಾತ ವಿದ್ವಾನ್ ವಾಲ್ಮೀಕಿ ಹೃದಯ ಪ್ರಕಾಶ ಪ್ರಶಸ್ತಿ ಪುರಸ್ಕೃತ, ಡಾ.ಪಾವಗಡ ಪ್ರಕಾಶ್ ಗುರೂಜಿಯವರಿಂದ, 'ರಾಮಾಯಣದ ಬಗ್ಗೆ ಸಂದೇಹ ಪರಿಹಾರ ಮತ್ತು ಸಂವಾದ ಕಾರ್ಯಕ್ರಮ'

ಹೊರ ಸಂಪರ್ಕಗಳು

[ಬದಲಾಯಿಸಿ]

'ಭಗವದ್ಗೀತೆಯನ್ನು ಆಲಿಸಿ'

[ಬದಲಾಯಿಸಿ]